ನಮ್ಮ ಸಮಾಲೋಚನೆ, ನಿಮ್ಮ ನೆಮ್ಮದಿ

Samalochane
Samalochane
  • Home
  • About Us
    • Who We Are
    • What We Do
    • Our Team
    • Contact Us
  • Publications
    • Magazine
    • Books
  • Activities
    • Recent Events
    • Upcoming Events
    • Training Programs
    • Helplines
  • More
    • Home
    • About Us
      • Who We Are
      • What We Do
      • Our Team
      • Contact Us
    • Publications
      • Magazine
      • Books
    • Activities
      • Recent Events
      • Upcoming Events
      • Training Programs
      • Helplines
  • Sign In
  • Create Account

  • My Account
  • Signed in as:

  • filler@godaddy.com


  • My Account
  • Sign out


Signed in as:

filler@godaddy.com

  • Home
  • About Us
    • Who We Are
    • What We Do
    • Our Team
    • Contact Us
  • Publications
    • Magazine
    • Books
  • Activities
    • Recent Events
    • Upcoming Events
    • Training Programs
    • Helplines

Account

  • My Account
  • Sign out

  • Sign In
  • My Account

ಸಮುದಾಯದ ಮಾನಸಿಕ ಆರೋಗ್ಯ ಅಗತ್ಯಗಳಿಗಾಗಿ ಒಂದು ವೇದಿಕೆ

ಬ೦ಧುಗಳೇ,  

     ಕರ್ನಾಟಕ ಹವ್ಯಾಸಿ ಆಪ್ತ ಸಮಾಲೋಚಕರ ವೇದಿಕೆ (ರಿ) ಸಂಸ್ಥೆಯು ನಿಮ್ಹಾನ್ಸ್‌ನ ಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚ೦ದ್ರಶೇಖರ್‌ರವರ ಮಾರ್ಗದರ್ಶನದಲ್ಲಿ ಹಾಗೂ ಹಿರಿಯ ಆಪ್ತ ಸಮಾಲೋಚಕರಾದ ವೃದ್ಯಸಾಹಿತಿ, ರಿಟೈರ್ಡ್ ಹೆಲ್ತ್ ಸೂಪರ್‌ವೈಸರ್ ಶ್ರೀ ಎಸ್. ವಿಶ್ವರೂಪಾಚಾರ್‌ರವರ ನೇತೃತ್ವದಲ್ಲಿ ದಿನಾ೦ಕ 08-08-2009ರ೦ದು ಪ್ರೊ. ಶೋಭಿನಿ ಎಲ್. ರಾವ್ ಮುಖ್ಯಸ್ಥರು ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಮನೋವಿಜ್ಞಾನ, ನಿಮ್ಹಾನ್ಸ್ ಅವರಿ೦ದ ವಿಧ್ಯುಕ್ತವಾಗಿ ಉದ್ಘಾಟನೆಯಾಯಿತು. 

    ಬೇರೆ ಬೇರೆ ಕೇ೦ದ್ರಗಳಲ್ಲಿ ಆಪ್ತಸಮಾಲೋಚನಾ ತರಬೇತಿ ಪಡೆದವರನ್ನು ಸ೦ಘಟಿಸಿ ಪ್ರಾರಂಭಿಸಲಾದ ಈ ವೇದಿಕೆಯು ರಾಜ್ಯದಲ್ಲಿಯೇ ಪ್ರಪ್ರಥಮ ಪ್ರಯತ್ನ.

     ಜೀವನ ಮೂರ್ತದಿ೦ದಲೂ ನಮ್ಮ ವೇದಿಕೆಯು ಉಚಿತ ಆಪ್ತ ಸಮಾಲೋಚನೆ, ಮಾನಸಿಕ ಆರೋಗ್ಯ ಮತ್ತು ಆಪ್ತ ಸಲಹಾ ತರಬೇತಿ ಹಾಗೂ ಭಾವನಾತ್ಮಕ ಸಮಸ್ಯೆಗಳಿಗೆ ಸಾ೦ತ್ವನ ನೀಡುತ್ತಾ ಮುಂದುವರೆಯುತ್ತಿದೆ.  ಪ್ರಸ್ತುತ ಸಮಾಜದಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಅನಪೇಕ್ಷಿತ ಸ್ಪರ್ಧಾತ್ಮಕತೆಗಳಿ೦ದ ಮಾನಸಿಕ, ಕೌಟು೦ಬಿಕ ಸಮಸ್ಯೆಗಳು ಹೆಚ್ಚಾಗಿ, ಇ೦ದು ಅಮೆಯಂತೆ ಚಿಪ್ಪಿನೊಳಗೆ ಸೇರಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಸಮಸ್ಯೆಗಳನ್ನೆಲ್ಲಾ ಆಲಿಸುವ ಕಿವಿಗಳಿ೦ಬ೦ತೆ ನಮ್ಮ ಕರ್ನಾಟಕ ಹವ್ಯಾಸಿ ಆಪ್ತ ಸಮಾಲೋಚಕರ ವೇದಿಕೆಯು ಕಾರ್ಯ ನಿರ್ವಹಿಸುತ್ತಿರುವುದು ಹೆಗ್ಗಳಿಕೆಯೆ ಸರಿ. ಸಮಾಜದ ಸ್ವಾಸ್ತ್ಯಕ್ಕಾಗಿ ಪ್ರಾರ೦ಭಿಸಿದ ವೇದಿಕೆ ఇ೦ದು ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊ೦ಡು ಪ್ರಸ್ತುತ ಆಪ್ತ ಸಮಾಲೋಚನಾ ಕ್ಷೇತ್ರಕ್ಕೆ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ. 


ವೇದಿಕೆಯ ಪ್ರಮುಖ ಕಾರ್ಯಕ್ರಮ ಇ೦ತಿವೆ:

    ಗ್ರಾಮೀಣರಿಗೆ ಸಮಾಲೋಚನಾ ತರಬೇತಿ ಮತ್ತು ಶಾಲೆಯಿ೦ದ ಶಾಲೆಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ 

    ವೇದಿಕೆ ಉಪಾಧ್ಯಕ್ಷರಾದ ಶ್ರೀಮತಿ ಸುವರ್ಣ ಅಮರನಾಥ್ ಅವರ ಪ್ರಾಯೋಜಕತ್ವದಲ್ಲಿ ವಿಜಾಪುರದಲ್ಲಿ ಗ್ರಾಮೀಣರಿಗೆ ಆಪ್ತ ಸಮಾಲೋಚನಾ ತರಬೇತಿ ಕಾರ್ಯಕ್ರಮ ನಡೆಯಿತು. ತರಬೇತಿಯಶಸ್ವಿಯಾಗಿ ಪೂರ್ಣಗೊ೦ಡು ವೇದಿಕೆ ಶಾಖೆಯೆ೦ಬ೦ತೆ ಸುಮನ ಆಪ್ತ ಸಲಹಾ ಕೇ೦ದ್ರ ವಿಜಯಪುರದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಆಪ್ತ ಸಲಹಾ ತರಬೇತಿಯ ಮು೦ದಿನ ಹೆಜ್ಜೆಯೆ೦ಬ೦ತೆ ವಿದ್ಯಾರ್ಥಿಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ "ಶಾಲೆಯಿ೦ದ ಶಾಲೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ" ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಾದ ವಿಜಯಪುರದ ಬಾಲಕಿಯರ ಪ್ರೌಢಶಾಲೆ ಹಾಗೂ ಜಯನಗರದ Model Education Society ಮು೦ತಾದ ಶಾಲೆಗಳ (ಪ್ರಾಯೋಗಿಕವಾಗಿ) ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವತ್ತು ಒಲಿವು ಹೊ೦ದಿರುವ ವೇದಿಕೆಯು ಬೆ೦ಗಳೂರು ಮಾತ್ರವಲ್ಲದೆ ಇತರ ಜಿಲ್ಲೆಗಳಿಗೂ ವಿಸ್ತರಿಸುವುದು ವೇದಿಕೆಯ ಆಶಯ.

ಲೈಂಗಿಕ ಆಪ್ತ ಸಮಾಲೋಚನಾ ತರಬೇತಿ ಕರ್ನಾಟಕ ಲೈಂಗಿಕ ಅಕಾಡೆಮಿ, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಹವ್ಯಾಸಿ 'ಆಪ್ತ ಸಮಾಲೋಚಕರ ವೇದಿಕೆ ಈ ಮೂರು ಸ೦ಸ್ಥೆಗಳ ಸಹಯೋಗದೊ೦ದಿಗೆ ಲೈಂಗಿಕ ಸಮಾಲೋಚನೆ ಮತ್ತು ಆಪ್ತ ಸಮಾಲೋಚನಾ ತರಬೇತಿಕಾರ್ಯಕ್ರಮ ಹಮ್ಮಿಕೊ೦ಡಿದೆ. 

ಆಪ್ತಸಮಾಲೋಚಕರಿ೦ದ ವ್ಯಕ್ತಿತ್ವ ವಿಕಸನ, ಸಮಯ ನಿರ್ವಹಣೆ, ಒತ್ತಡ ನಿರ್ವಹಣೆ ತರಬೇತಿಗಳು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗಾಗಿ ನಮ್ಮ

ವೇದಿಕೆಯು ಕುರಿತ ಆಪ್ತಸಲಹೆಗಾರರು ಹಲವಾರು ಸ೦ಘ ಸ೦ಸ್ಥೆಗಳಲ್ಲಿ ಹಾಗೂ Corporate ಹ೦ತದಲ್ಲಿ ವ್ಯಕ್ತಿತ್ವ ವಿಕಸನ, ಒತ್ತಡ ನಿರ್ವಹಣೆ, ಸಮಯ ನಿರ್ವಹಣೆ ಮತ್ತು ಜೀವನ ಕೌಶಲಗಳ ಬಗ್ಗೆ ಉಪನ್ಯಾಸ, ತರಬೇತಿಮತ್ತು ಕಾರ್ಯಾಗಾರಗಳನ್ನು ನೀಡುತ್ತಿದ್ದಾರೆ.

'ಸಮಾಲೋಚನ' ತ್ರೈಮಾಸಿಕ ವಾರ್ತಾಪತ್ರ ಪ್ರಕಟಣೆ ಆಪ್ತಸಮಾಲೋಚನೆಗೆ ಸ೦ಬ೦ಧಪಟ್ಟ ಉಪಯುಕ್ತ ಸ೦ಗ್ರಹ ಯೋಗ್ಯ ಲೇಖನಗಳು ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಗಳು ಮತ್ತು ವೇದಿಕೆಯ ಹೊಸ ಪ್ರಯೋಗಗಳು ಮು೦ತಾದವುಗಳನ್ನು ಒಳಗೊ೦ಡ ತ್ರೈಮಾಸಿಕವೊ೦ದನ್ನು ವೇದಿಕೆಯು ಪ್ರಕಟಿಸುತ್ತಿದೆ.

ನಮ್ಮ ವೇದಿಕೆಯ ಹಲವಾರು ಸದಸ್ಯರು ಇನ್ನೂ ಹಲವಾರು ಸೇವಾಕೇ೦ದ್ರಗಳಲ್ಲಿಯೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇ೦ತಹ ಕೇ೦ದ್ರಗಳು ನಗರದಾದ್ಯ೦ತ ಸಮಾಜಪರ ಚಟುವಟಿಕೆಗಳಲ್ಲಿ ತೊಡಗಿಸಿಕೊ೦ಡಿವೆ. ಅವುಗಳೆ೦ದರೆ,

ಆಪ್ತ ಸಮಾಲೋಚಕರಿಗಾಗಿ ಪುಸ್ತಕ ಭ೦ಡಾರ: ವೇದಿಕೆಯ ಸದಸ್ಯರ ಉಪಯೋಗಳಕ್ಕಾಗಿ ಸುಮಾರು ಒ೦ದು ಸಾವಿರಕ್ಕೂ ಹೆಚ್ಚು, ಆರೋಗ್ಯ ಶಿಕ್ಷಣ, ವ್ಯಕ್ತಿತ್ವ ವಿಕಸನ, ಆಪ್ತಸಮಾಲೋಚನಾ ಪುಸ್ತಕಗಳನ್ನು ಹೊ೦ದಿದ್ದು, ವ್ಯವಸ್ಥಿತವಾದ ಪುಸ್ತಕ ಭ೦ಡಾರ ಸೌಲಭ್ಯ ಹೊ೦ದಿದೆ. ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಎಸ್. ವಿಶ್ವರೂಪಾಚಾರ್‌ಅವರು ಈ ಎಲ್ಲಾ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದು, ಬಹಳಷ್ಟು ಸದಸ್ಯರು ಈಗಾಗಲೇ ಪುಸ್ತಕ ಭ೦ಡಾರದ ಪ್ರಯೋಜನ ಪಡೆಯುತ್ತಿದ್ದಾರೆ.

A Community Platform for Mental Health Needs

Dear Friends,

    The Karnataka Amateur Counselors Forum (Regd.) was formally inaugurated on August 8, 2009, by Prof. Shobhini L. Rao, Head of the Department of Mental Health and Social Psychology at NIMHANS. The organization was established under the guidance of renowned NIMHANS psychiatrist Dr. C.R. Chandrashekhar and under the leadership of senior counselor, medical writer, and retired health supervisor Sri N. Vishwarupachar.

This forum is a first-of-its-kind initiative in the state, bringing together individuals who have received counseling training from various centers.

From its inception, our forum has continued to provide free professional counseling, mental health awareness, and support for emotional problems and psychological challenges.

In today's changing lifestyle, characterized by unwanted competition, mental and family problems are increasing. There is a growing tendency to feel trapped or suffocated. Our forum stands proud as the "listening ears" for these problems. Started for the well-being of society, the forum has organized several public welfare programs and is offering its "squirrel's service" (humble contribution) to the field of counseling.


Key Programs of the Forum:

  • Rural Counseling Training: Under the sponsorship of the Forum's Vice President, Smt. Suvarna Amarnath, a counseling training program for rural residents was successfully conducted in Vijayapura.
  • Sumana Counseling Center: Following the success of the training, this center is now functional in Vijayapura as a branch of the forum.
  • School Health Education Program: As a next step, the "School-to-School Health Education Program" was launched to create awareness among students. This was piloted in schools like the Government Girls' High School in Vijayapura and the Model Education Society in Jayanagar. The forum aims to extend this beyond Bangalore to other districts.
  • Sexual Science and Counseling Training: In collaboration with the Karnataka Academy of Sexual Sciences and the Kannada Medical Literature Council, the forum has organized programs for sexual counseling and counselor training.
  • Personality Development & Workshops: Our expert counselors conduct workshops and lectures on personality development, time management, and stress management for students and employees in various organizations and corporate sectors.
  • 'Samalochana' Quarterly Newsletter: The forum publishes a quarterly newsletter containing useful articles related to counseling, new developments in the field, and the forum's latest experiments.
  • Library for Counselors: To assist members, a well-organized library has been established with over 1,000 books on health education, personality development, and counseling. These books were generously donated by the founding president, Sri N. Vishwarupachar. Many of our members have already benefitted by effectively utilising this Libarry.

Copyright © 2026 Karnataka Havyasi Apthasamalochakara Vedike - All Rights Reserved.

  • Home
  • Who We Are
  • What We Do
  • Contact Us